ಸಲಿಂಗ ಕಾಮ ಕಾನೂನು ಬಾಹಿರ ಯಾಕೆ?

ಸಲಿಂಗ ಕಾಮದ ಬಗ್ಗೆ ಸುಪ್ರೀಮ್ ಕೋರ್ಟ್ ಕೊಟ್ಟ ಬಹಳ ಕಾರಣಗಳಿಗಾಗಿ ಹುಬ್ಬೇರಿಸುವಂತೆ ಮಾಡಿದೆ. ಬಹಳಷ್ಟು ಜನರು ತೀರ್ಪಿನ ಬೆಂಬಲಕ್ಕಿದ್ದರೆ, ಇನ್ನು ಕೆಲವರು ಇದು ಸಲಿಂಗಿಗಳ ಹಕ್ಕು ಚ್ಯುತಿ ಎಂದು ತರ್ಕಿಸುತ್ತಿದ್ದಾರೆ. ಮೂಲತಹ ಸಲಿಂಗ ಕಾಮವೆಂಬುದು ಪೌರಾತ್ಯ, ಹಾಗೂ ಅರಬ್ ದೇಶಗಳಲ್ಲಿ ನಿಷೇಧಕ್ಕೊಳಗಾಗಲು ಮುಖ್ಯ ಕಾರಣ ಅಲ್ಲಿನ ರಿಲಿಜಿಯನ್ ಸಂಸ್ಕೃತಿ. ಮುಸ್ಲೀಮ್ ಕ್ರಿಶ್ಚಿಯನ್ ಮತ್ತಿತರ ಅಬ್ರಾಹಮಿಕ್ ಧರ್ಮಗ್ರಂಥಗಳು ಸಲಿಂಗ ಕಾಮವನ್ನು ಧರ್ಮವಿರೋಧಿ ಎಂದು ಬೋಧಿಸುತ್ತವೆಯಾದ್ದರಿಂದ ಅದನ್ನು ಅಪರಾಧ ಎಂದು ಸ್ವೀಕರಿಸಲಾಗಿತ್ತು. ವೈಜ್ನಾನಿಕ ಎಂದು ಹೇಳಲ್ಪಡುವ ನಾಸ್ತಿಕರ ರಾಜಕೀಯ ಪಕ್ಷ ಕಮ್ಯುನಿಸ್ಮ್ ಕೂಡ ಸಲಿಂಗ ಕಾಮದ ಬಗೆಗೆ ಬೇರೆಯದೆ ನಿರ್ಧಾರವನ್ನು ಹೊಂದಿರಲಿಲ್ಲ. ಬದಲಾಗಿ ರಿಲಿಜಿಯನ್ ಗಳು ಕೊಟ್ಟ ತೀರ್ಪನ್ನೆ ಸಲಿಂಗಿಗಳ ಮೇಲೆ ಹೇರಿತು. ಆದರೆ ಕಾರಣದ ವ್ಯಾಖ್ಯಾನವನ್ನಷ್ಟೆ ಬದಲು ಮಾಡಿತು. ಇದು 'ಅನಾಗರಿಕ' ಎಂಬ ಕಾರಣಕ್ಕೆ ಸ್ಟಾಲಿನ್ ನ ರಾಜಕಾರಣದಲ್ಲಿ ಅಪರಾಧವೆಂದು ಪರಿಗಣಿಸಲಾಗಿತ್ತು. (ಅನಾಗರಿಕ ಎಂದು ತೀರ್ಮಾನಿಸುವಲ್ಲಿ ವೈಜ್ನಾನಿಕ ಧೋರಣೆಯೇ ಇಲ್ಲದಿದ್ದದ್ದು ಕಮ್ಯುನಿಸ್ಮ್ ನ ವೈಜ್ನಾನಿಕ ನಿಲುವನ್ನು ಅನುಮಾನಪಡುವಂತಾಗಿದೆ).
ಲೈಂಗಿಕ ಆಸಕ್ತಿಯ(sexual orientation) ಕುರಿತಾಗಿ ಹೇಳುವದಾದರೆ ಸಲಿಂಗಿ(homosexuals), ದ್ವಿಲಿಂಗಿ(bisexuals) ಹಾಗೂ ಭಿನ್ನ ಲಿಂಗಿಗಳೆಂಬ(heterosexuals) ಪ್ರತ್ಯೇಕತೆ ಇದೆ. ಭಿನ್ನ ಲಿಂಗಿಗಳು ನಿಸರ್ಗ ಸಹಜವಾಗಿ ತಮ್ಮ ಭಿನ್ನ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೊಂದಿದ್ದರೆ, ಸಲಿಂಗಿಗಳು ಸಹಲಿಂಗಿಗಳ ಜೊತೆ ಆಸಕ್ತಿಯನ್ನು ಹೊಂದಿರುತ್ತಾರೆ. ಇನ್ನು ದ್ವಿಲಿಂಗಿಗಳು ಎರಡೂ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೊಂದಿರುವರು. ಪ್ರಸ್ತುತ ಸಲಿಂಗಿಗಳ ಬಗ್ಗೆ ಹೇಳುವದಾದರೆ, ಸಲಿಂಗಕಾಮಕ್ಕೆ ಸ್ಪಷ್ಟವಾದ ವೈಜ್ನಾನಿಕ ಕಾರಣಗಳು ಇಂದೂ ಸಿಗುತ್ತಿಲ್ಲ. ಅದನ್ನು ಗುಣಮುಖವಾಗಿಸಲು ಸಾಧ್ಯವೂ ಆಗಿಲ್ಲ. ದೀರ್ಘ ಕಾಲದ ಸೈಕೊಥೆರಪಿಗಳ ಮೂಲಕ ಕೆಲವು ಪ್ರಯೋಗಗಳು ಸಫಲತೆಯನ್ನು ಕಂಡುಕೊಂಡಿವೆ ಎಂದು ಹೇಳಲಾಗುತ್ತವೆಯಾದರೂ  ಸಂಪೂರ್ಣವಾಗಿ ಸಾಭೀತುಪಡಿಸಲಾಗಲಿಲ್ಲ. ಇಂಗ್ಲೆಂಡ್ ನ ಸೈಕಿಯಾಟ್ರಿಸ್ಟ್ ಮೈಕೆಲ್ ಕಿಂಗ್ ಎಂಬಾತ ಇಂಗ್ಲೆಂಡ್ ನಲ್ಲಿ 1,328 ಸೈಕೊಲೊಜಿಸ್ಟ್/ಸೈಕಿಯಾಟ್ರಿಸ್ಟ್ ರನ್ನು ಸರ್ವೆ ಮಾಡಿದ್ದ. ಅವರಲ್ಲಿ ೧೭% ವೈದ್ಯರುಗಳು ಸ್ವಲ್ಪ ಮಟ್ಟಿಗೆ ಹತ್ತಿಕ್ಕಲಷ್ಟೆ ಸಾಧ್ಯವಾಗಿದೆ ಎಂದಷ್ಟೆ ಹೇಳಿಕೊಂಡಿದ್ದಾರೆ. ಜಗತ್ತಿನಾದ್ಯಂತ ಯಾವುದೇ ವೈಜ್ನಾನಿಕ ಪ್ರಯೋಗಗಳು ಸ್ಪಷ್ಟವಾಗಿ ಸಫಲತೆಯನ್ನು ಕಂಡುಕೊಂಡಿಲ್ಲ. ಎಷ್ಟೊ ಸಲ ಇಂತಹ ಪ್ರಯೋಗಗಳಿಂದ ವಿಫಲರಾಗಿ ಸಲಿಂಗಿಗಳು ಆತ್ಮಹತ್ಯೆಗೆ ಪ್ರತ್ನಿಸಿದ ಉದಾರಣೆಗಳೂ ಇವೆ. ಮುಖ್ಯವಾಗಿ ಬಹಳಷ್ಟು ಸಲಿಂಗಿಗಳು ತಮ್ಮ ಲೈಂಗಿಕ ಮನೋಭಾವವನ್ನು ಬದಲಾಯಿಸಿಕೊಳ್ಳಲು ಸಿದ್ಧರಿಲ್ಲ.
ಅಷ್ಟಕ್ಕೂ ಸಲಿಂಗರತಿ ಅನೈಸರ್ಗಿಕವಾಗಿರಬಹುದು, ಅಥವಾ ಮಾನಸಿಕ ರೋಗವೇ ಇರಬಹುದು ಅದನ್ನು ಅದು ಒಪ್ಪಿತವಾದ ಕ್ರಿಯೆಯಾಗಿದ್ದಲ್ಲಿ ಅಪರಾಧ ಎಂದು ಪರಿಗಣಿಸಲು ಯಾವ ಆಧಾರವಿದೆ? ಅವರ ಆ ಲೈಂಗಿಕ ಮನಸ್ಥಿತಿ ಅವರ ಮಟ್ಟಿಗೆ ಸಹಜವಾಗಿ ಅವರ ಹುಟ್ಟಿನಿಂದಲೇ ಬರುವಂತಹುದು. ಅದು ಅವರ ತಪ್ಪೇ? ಅವರು ತಮ್ಮ ಭಿನ್ನ ಲಿಂಗಿಗಳಲ್ಲಿ ಲೈಂಗಿಕ ಆಸಕ್ತಿಯನ್ನೇ ಕಂಡುಕೊಳ್ಳದಿದ್ದಾಗ ಅವರವರಿಗೆ ಒಪ್ಪಿತವಾಗುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಯಾರಿಗೆ ಏನು ನಷ್ಟ?ಇನ್ನು ಕೆಲವು ರಿಲಿಜಿಯನ್ ಗಳು ಧಾರ್ಮಿಕ ಹಿನ್ನೆಲೆಯಿಂದ ಸಲಿಂಗ ಕಾಮವನ್ನು ಅಪರಾಧ ಎಂದು ಶಿಕ್ಷಿಸುವದಾದರೆ ಅಂತಹ ಧರ್ಮಗಳ ನಿಲುವನ್ನು ಅಮಾನವೀಯ ಎಂದೇ ಕರೆಯಬೇಕಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಇಂತಹ ರಿಲಿಜಿಯನ್ ಗಳು ಇನ್ನೊಂದು ಮಾನಸಿಕ ರೋಗವಾದ, ಅಮಾನವೀಯವಾಗಿ ಪ್ರಕಟಗೊಳ್ಳಬಹುದಾದ pedophilia(ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ಆಸಕ್ತಿ) ಅನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸದಿರುವದು ವಿಪರ್ಯಾಸ ಹಾಗೂ ಅಂತಹ ಧರ್ಮಗಳ ಅಮಾನವೀಯ ನಿಲುವಿಗೆ ಇನ್ನೊಂದು ನಿದರ್ಶನ. ಇದಕ್ಕೆ ಅಂತಹ ಧಾರ್ಮಿಕ ಸಂತರೂ ಹೊರತಾಗಿಲ್ಲ(ಉದಾ ಪ್ರೊಫೆಟ್ ಮೊಹಮ್ಮದರು ತಮ್ಮ ೬೦ನೆಯ ವಯಸ್ಸಿನಲ್ಲಿ ಅಪ್ರಾಪ್ತ ವಯಸ್ಸಿನ ಆಯೇಶಾರನ್ನು ಮದುವೆಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು).
ಅದೆನೆ ಇರಲಿ ಆಶ್ಚರ್ಯವೆಂದರೆ ಕೆಲವರು ಸಲಿಂಗಕಾಮವನ್ನು ಹಿಂದೂ ಧರ್ಮ ವಿರೋಧಿ ಎಂಬಂತೆ ಚಿತ್ರಿಸುತ್ತಿದ್ದಾರೆ. ಯಾವ ಹಿಂದೂ ಶಾಸ್ತ್ರ ಇದನ್ನು ’ಪಾಪ’ ಎಂದು ಪರಿಗಣಿಸಿದೆ? ಒಂದು ವೇಳೆ ಯಾವುದೊ ಒಂದು ಧರ್ಮಗ್ರಂಥ ಹೇಳಿದ್ದರೂ ಹಿಂದೂ ಧರ್ಮದ ಸಂಪ್ರದಾಯ, ಆಚರಣೆಗಳು ಧರ್ಮಗ್ರಂಥವನ್ನು ದುರ್ಬೀನು ಹಾಕಿ ಹುಡುಕಿ ಆಚರಿಸಲ್ಪಡುತ್ತಲೂ ಇಲ್ಲ. ಅಷ್ಟಕ್ಕೂ ಎಲ್ಲ ಹಿಂದೂಗಳಿಗೂ ಏಕರೂಪವಾದ ಧರ್ಮಗ್ರಂಥವೇ ಇಲ್ಲ. ಹಾಗಿರುವಾಗ ಸಲಿಂಗ ಕಾಮವೆಂಬುದು ಹಿಂದೂ ಧರ್ಮ ವಿರೋಧಿ ಎಂದು ಬಿಂಬಿಸುವ ಅವಶ್ಯಕತೆಯಿಲ್ಲ. ಹಾಗೆಂದ ಮಾತ್ರಕ್ಕೆ ಹಿಂದೂ ಸಮಾಜ ಸಲಿಂಗಕಾಮವನ್ನು ಪುಷ್ಠಿಕರಿಸಿದೆ ಎಂದಲ್ಲ. ಬಹುಶಹ ಜಗತ್ತಿನೆಲ್ಲೆಡೆಯಲ್ಲೆಡೆಯಂತೆ ಇಲ್ಲಿಯೂ ಸಲಿಂಗಿಗಳು ತಿರಸ್ಕರಿಸಲ್ಪಡುತ್ತಿದ್ದಾರೆ. ಆದರೆ ಧಾರ್ಮಿಕ ಕಾರಣಗಳಿಂದಲ್ಲ. ಕಾರಣ, ಸಮಾಜದಲ್ಲಿ ಬಹುಸಂಖ್ಯಾತರಾಗಿರುವ ಭಿನ್ನ ಲಿಂಗಿಗಳಿಗೆ (heterosexuals) ಸಲಿಂಗ ಕಾಮವೆಂದರೆ ಸಹಜವಾಗಿಯೆ ಅಸಹ್ಯ ಹುಟ್ಟಿಸುವಂತಾದ್ದು(ಸಲಿಂಗಿಗಳಿಗೆ ಭಿನ್ನ ಲಿಂಗ ಕಾಮನೆಗಳು ಅಸಹ್ಯ ಹುಟ್ಟಿಸುವಂತೆ). ಅಲ್ಲದೆ ಕೆಲವು ಸಲಿಂಗಿಗಳು ಇತರರೊಡನೆ ಒಪ್ಪಿತವಲ್ಲದೆ ನಡೆಸುವ ಅಸಭ್ಯ ನಡುವಳಿಕೆಗಳು ಅವರನ್ನು ತಿರಸ್ಕಾರದಿಂದ ನೋಡುವಂತಾಗಿದೆ. ಹಾಗೆ ಎಷ್ಟೊ ಸಲ ಸಲಿಂಗಿಗಳು ಪಬ್ಲಿಕ್ ಗಳಲ್ಲಿ ತಮ್ಮ ನಾರ್ಮಲ್ ಜನರ ಜೊತೆ ಒಪ್ಪಿತವಿಲ್ಲದೆ ಅಸಭ್ಯ ನಡುವಳಿಕೆಯಿಂದ ಕಿರಿಕಿರಿ ಮಾಡುವದು ನಿಜ. ಅದು ಖಂಡಿತ ಭಿನ್ನಲಿಂಗಿಗಳಲ್ಲಿ ನಡೆಯುವ ಲೈಂಗಿಕ ಕಿರುಕುಳದಷ್ಟೆ(sexual harassment) ಖಂಡನಾ ಯೋಗ್ಯ. ಅದನ್ನು ಹತ್ತಿಕಲು ಇರುವ ಕಾನೂನನ್ನು ಬಳಸಿಕೊಳ್ಳಬಹುದು. ಆದರೆ ಅದನ್ನು ನಾವು ಧಾರ್ಮಿಕ ಹಿನ್ನೆಲೆಯಲ್ಲಿ ಹಿಂದೂ ಧರ್ಮ ವಿರೋಧಿ ಎಂದು ಪರಿಗಣಿಸುವದು ಪೌರಾತ್ಯ ದೇಶಗಳು ನಮ್ಮ ಮೇಲೆ ಬಿತ್ತಿದ ಅವರ ರಿಲಿಜಿಯನ್ ಗಳ ಪ್ರಭಾವವನ್ನು ಪೊಷಿಸಿದಂತೆಯೆ ಸರಿ.


Comments